ಆಪರೇಷನ್ ಸಿಂದೂರ ಚೈನಾ, ಬಾಂಗ್ಲಾಕ್ಕೂ ಎಚ್ಚರಿಕೆ ಘಂಟೆ

Sanjeevkumar Niralagi
Published on

ಹಾವೇರಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಅತ್ಯಂತ ಸ್ವಾಗತಾರ್ಹ ಸಂಗತಿ. ದೇಶದ ಐಕ್ಯತೆ ದೃಷ್ಟಿಯಿಂದ ನಮ್ಮ ಹೆಮ್ಮೆಯ ಸೈನ್ಯದ ನಡೆಯನ್ನು ಪ್ರತಿಯೊಬ್ಬ ಪ್ರಜೆಯೂ ಸ್ವಾಗತಿಸಬೇಕು. ದೇಶದ ವಿಚಾರ ಬಂದಾಗ ಜಾತಿ, ಮಟ, ಪಂಥ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಲೇಬೇಕು. ಅಂದಾಗ ಮಾತ್ರ ವಿರೋಧಿಗಳಿಗೆ ನಡುಕ ಹುಟ್ಟಿಸಬಹುದಾಗಿದೆ. ಇದೀ ರೀತಿ ಉಗ್ರರಿಗೆ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದರೆ ಭವಿಷ್ಯದಲ್ಲಿ ಸಣ್ಣಪುಟ್ಟ ಘಟನೆಗಳನ್ನು ತಡೆಗಟ್ಟಬಹುದು. ಈ ಕಾರ್ಯಾಚರಣೆಯಿಂದ ನೆರೆಯ ಚೈನಾ ಹಾಗೂ ಬಾಂಗ್ಲಾದೇಶಗಳಿಗೂ ಭಾರತ ಎಚ್ಚರಿಕೆ ಕೊಟ್ಟಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net