ಮೃತ ವಿದ್ಯಾರ್ಥಿನಿ ತಾಯಿಗೆ ಪರಿಹಾರ ಚೆಕ್ ವಿತರಣೆ; ರಾಣೆಬೆನ್ನೂರಲ್ಲಿ ಬಸ್‌ನಿಂದ ಬಿದ್ದು ಅಸುನೀಗಿದ್ದ ಪ್ರಕರಣ

19 HVR 9
Published on

ಹಾವೇರಿ: ಹಾವೇರಿ ವಿಭಾಗದ ರಾಣೇಬೆನ್ನೂರ ಘಟಕದ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಮೃತಪಟ್ಟ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದ ವಿದ್ಯಾರ್ಥಿನಿ ಶ್ವೇತಾ ಎಲ್. ಸಾಂತಪ್ಪನವರ ತಾಯಿ ಶಕುಂತಲ ಎಲ್. ಸಾಂತಪ್ಪನವರ ಅವರಿಗೆ 2.85 ಲಕ್ಷ ರೂ. ಮೊತ್ತದ ಚೆಕ್‌ಅನ್ನು ಹಾವೇರಿ ವಾಯವ್ಯ ರಸ್ತೆ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಂ. ವಿತರಿಸಿದರು.
ಸಂಸ್ಥೆಯ ವಾಹನದಿಂದ ಅಪಘಾತವಾಗಿ ಸಂಸ್ಥೆಯ ವಾಹನದಲ್ಲಿನ ಪ್ರಯಾಣಿಕರು ಮೃತಪಟ್ಟರೆ ನಿಯಮಾನುಸಾರ ಮೂರು ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಘಟನೆ ನಡೆದ ದಿನ ಏ.12ರಂದು 15,000 ರೂ. ಮಧ್ಯಂತರ ಪರಿಹಾರವನ್ನು ವಾರಸುದಾರರಿಗೆ ನೀಡಲಾತ್ತು. ಬಾಕಿ 2.85 ಲಕ್ಷ ರೂ. ಮೊತ್ತದ ಚೆಕ್ ಇಂದು ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿಭಾಗಿಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಲೆಕ್ಕಾಧಿಕರಿ ಪಿ.ಮಹಾದೇವಸ್ವಾಮಿ ಹಾಗೂ ವಿಭಾಗೀಯ ಭದ್ರತಾ ಅಧೀಕ್ಷಕ ಎಚ್.ಡಿ.ತೊಗುಣಸಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net