ಹಾವೇರಿ: ತಾಂತ್ರಿಕ ಕಾರಣದಿಂದ ಒಂದು ದಿನ ಮುಂದೂಡಲ್ಪಟ್ಟಿದ್ದ ಹಾವೇರಿ ವಿಧಾನಸಭಾ ಕ್ಷೇತ್ರದ ನಾಮಪತ್ರ ಪರಿಶೀಲನೆ ಕಾರ್ಯ ಶನಿವಾರ ಮುಕ್ತಾಯಗೊಂಡಿದೆ. ನಾಮಪತ್ರ ಸಲ್ಲಿಸಿದ್ದ 22 ಅಭ್ಯರ್ಥಿಗಳ ಪೈಕಿ ಐದು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 17 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.
ಬಹುಜನ ಸಮಾಜ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಅಶೋಕ ಮರಿಯಣ್ಣವರ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಪ್ರೇಮಾ ಕಲಕೇರಿ, ದೇವೇಂದ್ರಪ್ಪ ಮೇಲ್ಮುರಿ, ದುರಗಪ್ಪ ಮಾಳಗಿ, ಭೀಮಪ್ಪ ಲಮಾಣಿ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ತಿಳಿಸಿದ್ದಾರೆ.