ನೊಳಂಬ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ

Published on

ಹಾವೇರಿ: ನೊಳಂಬ ಲಿಂಗಾಯತ ಸಂಘ ಹಾವೇರಿ ಜಿಲ್ಲಾ ಉಪ ಸಮಿತಿ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಹಾವೇರಿ, ಉತ್ತರ ಕನ್ನಡ, ದಾವಣೆಗೆರೆ ಹಾಗೂ ಧಾರವಾಡ ಜಿಲ್ಲೆಯ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಸ್ವವಿವರ, ಫೋಟೋ, ಆಧಾರ್ ಕಾರ್ಡ್ ಹಾಗೂ ನಕಲಿ ಅಂಕಪಟ್ಟಿಯಿಂದಿಗೆ ಜೂ.15ರೊಳಗಾಗಿ ಅಧ್ಯಕ್ಷರು, ನೊಳಂಬ ಲಿಂಗಾಯತ ಸಂಘ, ಉಪಸಮಿತಿ, ಕಾಗಿನೆಲೆ ರಸ್ತೆ, ಹಾವೇರಿ ಇಲ್ಲಿಗೆ ಸಲ್ಲಿಸಬೇಕು. ಜೂ.22ರಂದು ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಸಮಾರಂಭದಲ್ಲಿ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net