ಹಾವೇರಿ: ಗುತ್ತಲ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಗುತ್ತಲ 11 ಕೆವಿ ಮಾರ್ಗದಲ್ಲಿ ಜು.22ರಂದು ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಭಾಗದ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗುತ್ತಲ ಪಟ್ಟಣ, ಕಂಚಾರಗಟ್ಟಿ, ಕುರಗುಂದ, ತಿಮ್ಮಾಪೂರ, ಭರಡಿ, ಹಾವನೂರ, ಹರಳಹಳ್ಳಿ, ಹಂಸಿ, ಶಾಖಾರ ಮತ್ತು ಬಸಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.