ಇಹಲೋಕ ತ್ಯಜಿಸಿದ ಹಾವೇರಿ ಕಾ ರಾಜಾ

file7ph13odikyssxythdx1679668432
Published on

ಹಾವೇರಿ: ಕಳೆದ 15 ವರ್ಷಗಳಿಂದ ಆ ಹೋರಿಯ ಮೈಮುಟ್ಟುವ ಸಾಹಸಕ್ಕೆ ಯಾರು ಕೈ ಹಾಕಿರಲಿಲ್ಲ. ಆ ಕೊಬ್ಬರಿ ಹೋರಿ ಅಖಾಡಕ್ಕೆ ಇಳಿದರೆ ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡೇ ಆಗಮಿಸುತ್ತಿತ್ತು. ಹುಲಿಯಂತೆ ಗತ್ತು ಗಾಂಭೀರ್ಯವಿದ್ದ ಆ ಹೋರಿಗೆ ಅಪಾರ ಅಭಿಮಾನಿಗಳನ್ನ ಬಿಟ್ಟು ಇಹಲೋಕ ತ್ಯಜಿಸಿದೆ.

ಹೋರಿ ಅಖಾಡದ ಹುಲಿ, ಬಹುಮಾನಗಳ ಜಯಶಾಲಿ, ಹಾವೇರಿ ಕಾ ರಾಜಾ ಎಂದೇ ಖ್ಯಾತಿ ಪಡೆದಿದ್ದ ಹೋರಿಯ ಅಂತಿಮ ದರ್ಶನ ಪಡೆಯಲು ಯುವಕರ ದಂಡೇ ಆಗಮಿಸಿತ್ತು. ಈ ಹೋರಿಯನ್ನ ಕಂಡರೆ ಮಾಲೀಕರಿಗೆ ಎಲ್ಲಿಲ್ಲದ ಪ್ರೀತಿ ಅಭಿಮಾನ.

ಇನ್ನು ಹೋರಿಯನ್ನ ಮನೆ ಮಗನಂತೆ ಸಾಕಿದ್ದ ಮಾಲೀಕ ರಾಜು ಕೊಡಳ್ಳಿ ಮಾತನಾಡಿ ಈ ಹೋರಿ ರಾಜ್ಯದ ನಾನಾ ಭಾಗದಲ್ಲಿ ಬಹುಮಾನಗಳನ್ನು ಜಯಸಿತ್ತು. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು. ಬಾರದ ಲೋಕಕ್ಕೆ ಪಯಣ ಬೆಳಸಿದೆ ಎಂದು ಮಾತನಾಡುವ ವೇಳೆ ತಮ್ಮ ಸಾಕು ಪ್ರಾಣಿಯನ್ನ ನೆನದು ಭಾವುಕರಾದರು.

ಒಂದು ಕಾಲದಲ್ಲಿ ಹಾವೇರಿ ಕಾ ರಾಜಾನನ್ನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕುತ್ತಿದ್ದರು. ಆದರೆ, ಹೋರಿ ಇಹಲೋಕ ತ್ಯತಜಿಸಿದನ್ನ ಕಂಡು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net