

ಹಾವೇರಿ: ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಓ)ಯಾಗಿ ಶಿವಮೊಗ್ಗ ಮೂಲದ ಡಾ.ರಾಜೇಶ ಸುರಗಿಹಳ್ಳಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಶಿವಮೊಗ್ಗ ಡಿಎಚ್‌ಒ ಆಗಿ, ಬೆಂಗಳೂರಿನ ಆರೋಗ್ಯ ಇಲಾಖೆಯ ಕಮಿಷನರ್ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ರಾಜೇಶ ಅವರು, ಇದೀಗ ಹಾವೇರಿ ಜಿಲ್ಲೆಯ ನೂತನ ಡಿಎಚ್‌ಒ ಆಗಿ ವರ್ಗಾವಣೆಗೊಂಡಿದ್ದಾರೆ. ಪ್ರಭಾರಿ ಡಿಎಚ್‌ಒ ಡಾ.ಎಂ.ಜಯಾನಂದ ಅವರಿಂದ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಜಯಾನಂದ ಅವರು ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.