ಹಾವೇರಿ ನೇಮಿನಾಥ ಜಿನಮಂದಿರದಲ್ಲಿ ಧಾರ್ಮಿಕ ಜಿನ ಸಂಸ್ಕಾರ ಶಿಬಿರಕ್ಕೆ ಚಾಲನೆ

27 HVR 8 A
Published on

ಹಾವೇರಿ: ನಗರದ ನೇಮಿನಾಥ ಜಿನಮಂದಿರದಲ್ಲಿ ಚಾತುರ್ಮಾಸ ಕೈಗೊಂಡಿರುವ ಚರ್ಯ ಶಿರೋಮಣಿ 108 ಶ್ರೀ ವಿಧಿತ ಸಾಗರ ಮಹಾರಾಜರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಜಿನಸಂಸ್ಕಾರ ಶಿಬಿರಕ್ಕೆ ಚಾಲನೆ ದೊರೆತಿದೆ.

ಬೆಳಗ್ಗೆ 6 ಗಂಟೆಗೆ ಅಭಿಷೇಕದಿಂದ ಪ್ರಾರಂಭವಾಗುವ ಶಿಬಿರ ಪೂಜಾ ವಿಧಾನ, ಧಾರ್ಮಿಕ ಪಾಠ, ಪ್ರವಚನ, ಆರತಿ ಮತ್ತಿತರ ಕಾರ್ಯಕ್ರಮಗಳು ರಾತ್ರಿವರೆಗೆ ಒಂದು ವಾರ ನಡೆಯಲಿವೆ.

ಬಾಲ ಬ್ರಹ್ಮಚಾರಿ ಶ್ರೀ ಮಹಾವೀರ ಭಯ್ಯಜಿ, ಸಿದ್ದನಗೌಡ ಪಾಟೀಲ ಹಾರೋಗೇರಿ ಹಾಗೂ ಸಾಧನಾ ದೀದಿ ಶಿಬಿರಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. 135ಕ್ಕೂ ಅಧಿಕ ಶಿಭಿರಾರ್ಥಿಗಳು ಜಿನಧರ್ಮದ ಜ್ಞಾನವನ್ನು ತುಂಬಾ ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ. ಶಿಭಿರಾರ್ಥಿಗಳಿಗೆ ಊಟ, ವಸತಿ, ದೋತಿ ದುಪ್ಪಟ್ಟಾ, ಸೀರೆ, ಪೂಜಾ ಪಾತ್ರೆಗಳು, ಶಾಸ್ತ್ರ, ನೋಟ್ ಪುಸ್ತಕ, ಪೆನ್ನು ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ.

ಶಿಭಿರದಲ್ಲಿ ನಡೆಯುವ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ 3 ಹಂತದಲ್ಲಿ ಬಹುಮಾನ (ಬೆಳ್ಳಿ) ವಿತರಣೆ ಮಾಡಲಾಗುವುದು. ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ಜೈನ ಅಸೋಸಿಯೇಷನ್ ಹಾವೇರಿ ವಿಭಾಗದ ಕಾರ್ಯಕಾರಿ ಮಂಡಳಿ ಸದಸ್ಯ ಎಸ್.ಎ.ವಜ್ರಕುಮಾರ ತಿಳಿಸಿದರು.

ಕಾರ್ಯಕ್ರಮದಲ್ಲಿ ನೇಮಿನಾಥ ಜಿನಮಂದಿರ ಕಮಿಟಿ ಅಧ್ಯಕ್ಷ ಚಂದ್ರನಾಥ ಕಳಸೂರ, ರತ್ನತ್ರಯ ಮಹಿಳಾಸಮಾಜ, ಭಾರತೀಯ ಜೈನ ಮಿಲನ, ಸಮ್ಯಕ್ ಜ್ಞಾನ ಜಿನಧರ್ಮ ಪ್ರಭಾವನ ಯುವಕ ಮಂಡಲದ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net