ಹಾವೇರಿ: ಪ್ರಸಕ್ತ 2024-25ನೇ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ 5,000 ರೂ. ಆರ್ಥಿಕ ನೆರವು ನೀಡಲು ಅರ್ಹ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ವೈಯಕ್ತಿಕ ನೇಕಾರರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಕೈಮಗ್ಗ ನೇಕಾರಿಕೆ ವೃತ್ತಿ ಮಾಡುತ್ತಿರುವ ಅರ್ಹ ಕಾರ್ಯನಿರತ ಕೈಮಗ್ಗ ನೇಕಾರರಿಂದ ಹಾಗೂ ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಅರ್ಹ ನೇಕಾರರಿಗೆ ವಾರ್ಷಿಕ 5,000 ರೂ. ನೆರವು ನೀಡಲು ಈಗಾಗಲೇ ಕಳೆದ ಸಾಲಿನಲ್ಲಿ (2023-24ನೇ ಸಾಲಿನಲ್ಲಿ) ನೇಕಾರ ಸಮ್ಮಾನ ಯೋಜನೆಯಡಿ ಸೇವಾಸಿಂಧು ಪೋರ್ಟಲ್‌ನಲ್ಲಿ ನೊಂದಾಯಿಸಿದ ಕೈಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಯಿಂದ ಪಡೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅ.21ರೊಳಗಾಗಿ ಸಂಬಂಧಿಸಿದ ಕೈಮಗ್ಗ ಅಭಿವೃದ್ಧಿ ನಿಗಮ, ನೇಕಾರ ಸಹಕಾರ ಸಂಘ-ಸಂಸ್ಥೆಗಳ ಮೂಲಕ, ಉತ್ಪಾದಕ ಸಂಸ್ಥೆಯ ಮೂಲಕ ಅಥವಾ ನೇರವಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಸಿ ಬ್ಲಾಕ್, ಕೊಠಡಿ ಸಂ. 43, ದೇವಗಿರಿ, ಹಾವೇರಿ ಈ ವಿಳಾಸಕ್ಕೆ ತಲುಪಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಸಿ ಬ್ಲಾಕ್, ಕೊಠಡಿ ಸಂ. 43, ದೇವಗಿರಿ, ಹಾವೇರಿ ದೂರವಾಣಿ ಸಂಖ್ಯೆ 08375-249050 ಸಂಪರ್ಕಿಸಬಹುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.