ಹಾವೇರಿ: ನೆಹರು ಯುವ ಕೇಂದ್ರ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಸೋಮವಾರ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಹಾವೇರಿ ನಗರದ ಮೈಲಾರ ಮಹದೇವಪ್ಪ ರೈಲು ನಿಲ್ದಾಣದ ಆವರಣವನ್ನು ಸ್ವಚ್ಚಗೊಳಿಸಲಾಯಿತು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ, ರೈಲು ನಿಲ್ದಾಣ ಅಧಿಕಾರಿ ಶಂಕರಾನಂದ ಎ.ಕೆ., ಮಿತಿಕುಮಾರಿ, ಎನ್.ಎಸ್.ಎಸ್. ಅಧಿಕಾರಿ ಶಮಂತಕುಮಾರ ಕೆ.ಎಸ್., ಶಿವಾನಂದ ಪಾಯಮಲ್ಲೆ, ಬಶೀರ ಅಹ್ಮದ ಪಟೇಲ್, ಗಣೇಶ ರಾಯ್ಕರ, ಎನ್.ಎಸ್.ಎಸ್. ವಿದ್ಯಾರ್ಥಿಗಳು ಇತರರಿದ್ದರು.