ಗಣೇಶ ಹಬ್ಬ ಸಾಮರಸ್ಯದ ಸಂಕೇತ; ನೆಗಳೂರ ಗಣೇಶೋತ್ಸವದಲ್ಲಿ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

29 HVR 5
Published on

ಹಾವೇರಿ: ಗಣೇಶ ಹಬ್ಬ ಸೇರಿದಂತೆ ಇತರ ಹಬ್ಬಗಳು, ಜಾತ್ರೆ, ಉತ್ಸವಗಳು ಸಮಾಜದಲ್ಲಿ ಸಾಮರಸ್ಯ ಉಂಟು ಮಾಡುವ ಸಂಕೇತಗಳಾಗಿವೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ನೆಗಳೂರ ಕಾ ಸಾಮ್ರಟ್ ಮಹಾ ಗಣಪತಿ ಗಣೇಶೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಾರತ ಹಬ್ಬ, ಉತ್ಸವ, ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿ. ಅದರಲ್ಲೂ ಗಣೇಶ ಹಬ್ಬ ಸರ್ವಜನಾಂಗದವರು ಪ್ರತಿಷ್ಠಾಪಿಸಿ ಸಂಭ್ರಮಿಸುವ ಧಾರ್ಮಿಕ ಹಬ್ಬವಾಗಿದೆ. ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡುವುದರ ಹಿನ್ನಲೆಯೂ ಅಷ್ಟೇ ಪ್ರಮುಖ ಪಾತ್ರವಹಿಸಿದೆ ಎಂದರು.

ಈ ಹಬ್ಬದ ಆಚರಣೆಯಿಂದ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನತೆಯನ್ನು ಸನ್ನದಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ನಾವೆಲ್ಲ ಒಂದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದೆ. ಗಣೇಶ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ದೇವರು. ಆತ ಸರ್ವ ವಿಘ್ನಗಳ ನಿವಾರಕನಾಗಿ ಪ್ರಥಮ ಪೂಜಿತನಾಗಿದ್ದಾನೆ. ಶ್ರಾವಣ ಮಾಸ ಶಿವನಿಗೆ ಅರ್ಪಿತವಾದರೆ, ಭಾದ್ರಪದ ಮಾಸ ಗಣೇಶನಿಗೆ, ಆಶ್ವೀಜ ಮಾಸ ಪಾರ್ವತಿಗೆ, ಕಾರ್ತಿಕ ಮಾಸ ಷಣ್ಮುಖನಿಗೆ ಮೀಸಲಾಗಿದೆ ಎಂದರು.

ಮಂಡಳಿ ವತಿಯಿಂದ ಶ್ರೀಗಳು ಹಾಗೂ ಮಣ್ಣಿನ ಗಣೇಶ ಮೂರ್ತಿ ತಯಾರಕ ವಿಶ್ವನಾಥ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿ.ಎಸ್.ಜತ್ತಿ, ವೀರಣ್ಣ ಬಡಿಗೇರ, ಚೇತನ ಶಶಿಮಠ, ವರುಣ ಜತ್ತಿ, ಪುನೀತ್ ಮಠದ, ರೇವಣೆಪ್ಪ ಕಿವುಡಿ, ವಿನಾಯಕ ಬಡಿಗೇರ, ಶ್ರೀಧರ ಮಠಪತಿ, ಚಂದ್ರಪ್ಪ ಬುಕ್ಕಟಗಾರ, ಶಂಭು ಕಟ್ಟೆಪ್ಪನವರ, ಕುರುವತ್ತೆಪ್ಪ ದಡ್ಡಿ, ನಿಂಗಪ್ಪ ಹುಲೆಪ್ಪನವರ, ಬಸಪ್ಪ ಶಟ್ಟೆಪ್ಪನವರ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net