ಗಣಪತಿಗೆ ಪೂಜೆ ಸಲ್ಲಿಸಿ ಈದ್ ಆಚರಣೆ; ನೆಗಳೂರಲ್ಲಿ ಭಾವೈಕ್ಯತೆ ಸಾರಿದ ಜನತೆ

16 HVR 7
Published on

ಹಾವೇರಿ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಸೋಮವಾರ ಮುಸ್ಲಿಮರು ಸರ್ವ ಧರ್ಮ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಗ್ರಾಮದ ಹಿಂದು- ಮುಸ್ಲಿಂ ಸಮಾಜದ ಪ್ರಮುಖರು ಗಣೇಶ ಮಂಟಪದಲ್ಲಿ ಸೇರಿದರು. ಮುಸ್ಲಿಮರು ಹಬ್ಬದ ಪ್ರಯುಕ್ತ ಗಣೇಶನಿಗೆ ವಿಶೇಷ ಪೂಜೆಗೈದರು. ಹಿಂದುಗಳು ಮುಸ್ಲಿಮರಿಗೆ ಹಬ್ಬದ ಶುಭ ಕೋರಿದರು.
ಗ್ರಾಮದ ಪ್ರಮುಖರಾದ ಸಿದ್ದಪ್ಪ ಬಾಲಣ್ಣನವರ, ಬಸನಗೌಡ ಸುಕುಳಿ, ಶಿವಾನಂದ ಸೊಪ್ಪಿನ, ರುದ್ರಗೌಡ ರೊಡ್ಡ ಗೌಡರ, ಭರಮಣ್ಣ ದೊಡ್ಡಿರಪ್ಪನವರ, ಸಂಜಯಗಾಂಧಿ ಸಂಜೀವಣ್ಣನವರ, ಹುಚ್ಚುಸಾಬ್ ನದಾಫ್, ಗೌಸು ಸಾಬ್ ಬಲ್ಲಭಾಯಿ, ಬಿ.ಪಿ.ದೊಡ್ಡಪಿಂಜಾರ, ರಜಾಕ್‌ಸಾಬ್ ಮುಲ್ಲಾ, ಹುಸೇನ್‌ಸಾಬ ರಾಟಿಮನಿ, ದಸಿಗಿರ್‌ಸಾಬ ಕಮಗಾಲ, ಹುಸೇನ್‌ಸಾಬ ತೆಲಿಗಿ, ಗೌಸುಸಾಬ ಮುಜಾವರ, ಈರಣ್ಣ ತಂಬೂರಿ, ಮೌನೇಶ ಮಾರೆಡ್ಡಿ, ಸೇರಿದಂತೆ ಹಿಂದು- ಮುಸ್ಲಿಮರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net