ಹಾನಗಲ್ಲ: ತಾಲೂಕಿನ ಮಹಾರಾಜಪೇಟೆ ಬಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 9 ಮತ್ತು 11ನೇ ತರಗತಿಯಲ್ಲಿ ಖಾಲಿ ಇರುವ ಸ್ಥಳಗಳಿಗೆ ಅರ್ಹ ವಿದ್ಯಾರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
9ನೇ ತರಗತಿ ಪ್ರವೇಶ ಬಸುವ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ 8ನೇ ತರಗತಿ ಓದುತ್ತಿರುಬೇಕು ಹಾಗೂ 11ನೇ ತರಗತಿಗೆ ಆಯ್ಕೆ ಬಸುವ ವಿದ್ಯಾರ್ಥಿಗಳು 10ನೇ ತರಗತಿ ಓದುತ್ತಿರಬೇಕು. ಅರ್ಹ ವಿದ್ಯಾರ್ಥಿಗಳು ಅ.30ರೊಳಗಾಗಿ ವೆಬ್‌ಸೈಟ್ https://nvsadmissionclassnine.in/nvs/homepageನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.