ಮೈಕ್ರೋ ಫೈನಾನ್ಸ್‌ಗಳು ಮಾನವೀಯತೆ ರೂಢಿಸಿಕೊಳ್ಳಬೇಕು; ನವಚೇತನ ಮೈಕ್ರೋ ಫೈನಾನ್ಸ್‌ ಕಿರು ನಾಟಕ ಜಾಗೃತಿ ಸಮಾರಂಭದಲ್ಲಿ ಸಿಪಿಐ ಸಂತೋಷ ಪವಾರ ಕಿವಿಮಾತು

11 HVR 5
Published on

ಹಾವೇರಿ: ಮೈಕ್ರೊ ಫೈನಾನ್ಸ್‌ನಲ್ಲಿ ಸಾಲ ಪಡೆಯುವವರು ಬಡವರು, ರೈತರು, ದಿನಗೂಲಿ ಕೆಲಸಗಾರರೇ ಆಗಿರುತ್ತಾರೆ. ಹಾಗಾಗಿ, ಫೈನಾನ್ಸ್‌ಗಳು ಜನರೊಂದಿಗೆ ಮಾನವೀಯತೆ ಇಂದ ನಡೆದಕೊಳ್ಳಬೇಕು ಎಂದು ಹಾವೇರಿ ಗ್ರಾಮೀಣ ವೃತ್ತ ನೀರಿಕ್ಷಕರಾದ ಸಂತೋಷ ಪವಾರ ಅಭಿಪ್ರಾಯಪಟ್ಟರು.

ಇಲ್ಲಿನ ಅಶ್ವಿನಿನಗರದ ನವಚೇತನ ಮೈಕ್ರೊ ಫೈನಾನ್ಸ್ ಕಚೇರಿಯಲ್ಲಿ ಅಕ್ಮಿ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಿರು ನಾಟಕದ ಮೂಲಕ ಫೈನಾನ್ಸ್‌ಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಮೈಕ್ರೊ ಫೈನಾನ್ಸ್ ಬಗ್ಗೆ ಕಾನೂನು ತಂದಿದೆ. ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಕ್ರೊ ಫೈನಾನ್ಸ್ ಹಾವಳಿ ಇಂದ ಸಾಲ ಪಡೆದವರು ಪರದಾಡುವ ಸ್ಥಿತಿ ಬಂದಿದೆ. ರೈತರು ಮುಗ್ದರಾಗಿರುವದರಿಂದ ಮಾನವೀಯತೆ ಇಂದ ಮೈಕ್ರೊ ಫೈನಾನ್ಸ್ ಸಿಬ್ಬಂದಿ ವರ್ತಿಸಬೇಕು ಎಂದರು.

ಶಾರದಾ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ನಿರೂಪಿಸಿದರು. ತೀರ್ಥಪ್ರಸಾದ ವಂದಿಸಿದರು. ನವಚೇತನ ಸಂಸ್ಥೆ ನಿರ್ದೇಶಕ ಉಲ್ಲಾಸ ಕೆ. ಉಪಸ್ಥಿತರಿದ್ದರು.

ಕೋಟ್:

ಜಿಲ್ಲೆಯಾದ್ಯಂತ 27ಕ್ಕೂ ಹೆಚ್ಚು ಮೈಕ್ರೊ ಫೈನಾನ್ಸ್‌ನ 139 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 1,141 ಸಿಬ್ಬಂದಿ ಕಾರ್ಯನಿರ್ವಸುತ್ತಿದ್ದಾರೆ. ಮೈಕ್ರೊ ಫೈನಾನ್ಸ್‌ನಲ್ಲಿ ಒಟ್ಟು ಎರಡೂವರೆ ಲಕ್ಷ ಖಾತೆಗಳಿದ್ದು, 1,313 ಕೋಟಿ ವಹಿವಾಟು ನಡೆಯುತ್ತಿದೆ. ಡಾವಣಗೆರೆಯ ಪೃಕೃತಿ ಸಾಂಸ್ಕೃತಿಕ ಕಲಾ ತಂಡದಿಂದ ಜಿಲ್ಲೆಯಾದ್ಯಂತ ಜಾಗೃತಿ ನಾಟಕ ಪ್ರದರ್ಶನ ನಡೆಯಲಿದೆ.

- ನಾಗೇಂದ್ರ ಮಾಳಿ, ಅಧ್ಯಕ್ಷ, ನವಚೇತನ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net