ಹಾವೇರಿ: ಭಾರತೀಯ ಅಂಚೆ ಇಲಾಖೆ ವತಿಯಿಂದ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಅ.12ರಂದು ಮೇಲ್ ಹಾಗೂ ಪಾರ್ಸೆಲ್ ಡೇ ಹಾಗೂ ಅ.13ರಂದು ಅಂತ್ಯೋದಯ ದಿನ ಆಚರಿಸಲಾಗುತ್ತಿದೆ.
ಅ.13ರಂದು ಆಯ್ದ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಅಭಿಯಾನ್, ಆಧಾರ್ ಸೀಡಿಂಗ್ ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಾವೇರಿ ವಿಭಾಗದ ಅಂಚೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.