ನನ್ನ ದೇಶ ನನ್ನ ಮಣ್ಣು ಯಾತ್ರೆ ನಾಳೆಯಿಂದ

Published on

ಹಾವೇರಿ: ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನನ್ನ ದೇಶ ನನ್ನ ಮಣ್ಣು (ಅಮೃತ ಕಳಶ) ಯಾತ್ರೆ ಕಾರ್ಯಕ್ರಮ ಅ.12ರಂದು ರಾಣಿಬೆನ್ನೂರ, ಬ್ಯಾಡಗಿ, ಹಾನಗಲ್ಲ, ಸವಣೂರ, ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಶಿಗ್ಗಾಂವಿಯಲ್ಲಿ ಮತ್ತು ಅ.17ರಂದು ಹಾವೇರಿಯಲ್ಲಿ ಜರುಗಲಿದೆ.
ಅ.12ರಂದು ರಾಣೆಬೆನ್ನೂರ ನಗರದ ಕೆ.ಎಲ್.ಇ.ಮಹಿಳಾ ಪದವಿ ಕಾಲೇಜಿನಿಂದ ತಾ.ಪಂ. ಕಚೇರಿವರೆಗೆ, ಬ್ಯಾಡಗಿಯ ಬಿ.ಇ.ಎಸ್‌ಎಂ.ಕಲಾ ಮತ್ತು ವಾಣಿಜ್ಯ ಕಾಲೇಜ್‌ನಿಂದ ತಾ.ಪಂ. ಕಚೇರಿವರೆಗೆ, ಶಿಗ್ಗಾಂವಿ ಹೊಸ ಬಸ್ ನಿಲ್ದಾಣದಿಂದ ತಾ.ಪಂ. ಕಚೇರಿವರೆಗೆ, ಸವಣೂರ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜ್‌ನಿಂದ ತಾ.ಪಂ. ಕಚೇರಿವರೆಗೆ, ಹಾನಗಲ್ಲ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜ್‌ನಿಂದ ತಾ.ಪಂ. ಕಚೇರಿವರೆಗೆ, ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತಾ.ಪಂ. ಕಚೇರಿವರೆಗೆ, ರಟ್ಟಿಹಳ್ಳಿ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜ್‌ನಿಂದ ತಾ.ಪಂ. ಕಚೇರಿವರೆಗೆ ಹಾಗೂ ಅ.17ರಂದು ಹಾವೇರಿಯಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್‌ನಿಂದ ತಾ.ಪಂ. ಕಚೇರಿವರೆಗೆ ನನ್ನ ದೇಶ ನನ್ನ ಮಣ್ಣು ಯಾತ್ರೆ ಜರುಗಲಿದೆ ಎಂದು ನೆಹರು ಯುವ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net