ನಾಗೇಂದ್ರನಮಟ್ಟಿಯಲ್ಲಿ ವೈಕುಂಠ ಏಕಾದಶಿ, ಲಡ್ಡು ವಿತರಣೆ ಜ.10ರಂದು

9 HVR 9
Published on

ಹಾವೇರಿ: ಇಲ್ಲಿನ ನಾಗೇಂದ್ರನಮಟ್ಟಿ 8ನೇ ಕ್ರಾಸ್ ಗಣಜೂರ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ.10ರಂದು ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಭಕ್ತರಿಗೆ ಲಡ್ಡು ವಿತರಿಸಲಾಗುವುದು.

ಬೆಳಗ್ಗೆ 5 ಗಂಟೆಗೆ ವೆಂಕಟೇಶ್ವರ ದೇವರಿಗೆ 16 ದ್ರವ್ಯಗಳಿಂದ ವಿಶೇಷ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗುವುದು. 8ಕ್ಕೆ ಪಾಲಕಿ ಉತ್ಸವ, ಬೆಳಗ್ಗೆ 9ಕ್ಕೆ ವೈಕುಂಠ ಮಹಾದ್ವಾರದಲ್ಲಿ ಶ್ರೀದೇವಿ, ಭೂದೇವಿ ಸಹಿತ ವೆಂಕಟೇಶ್ವರ ಸ್ವಾಮಿ ಚರಪ್ರತಿಷ್ಠಾಪನೆ ಮಾಡಲಾಗುವುದು. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಭಕ್ತರಿಗೆ ದರ್ಶನ ಹಾಗೂ ಲಡ್ಡು ವಿತರಣೆ ಮಾಡಲಾಗುತ್ತದೆ ಎಂದು ದೇಗುಲದ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಸಾದ ಕತ್ತೆಪಲ್ಲಿ ಹಾಗೂ ಕಾರ್ಯದರ್ಶಿ ಕೃಷ್ಣ ವೆಲ್ಕೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net