ನಾಗೇಂದ್ರನಮಟ್ಟಿ ಅಂಗನವಾಡಿಯಲ್ಲಿ ತಾಯಂದಿರ ಸಭೆ

29 HVR 7
Published on

ಹಾವೇರಿ: ನಗರದ ನಾಗೇಂದ್ರಮಟ್ಟಿಯ ಅಂಗನವಾಡಿ ಕೇಂದ್ರ-223ರಲ್ಲಿ ಇತ್ತೀಚೆಗೆ ತಾಯಂದಿರ ಸಭೆ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ವಲಯ ಮೇಲ್ವಿಚಾರಕಿ ಎಚ್.ಬಿ.ಬಸವನಾಯಕರ ಮಾತನಾಡಿ, ಗರ್ಭಿಣಿಯರು ಕಡ್ಡಾಯವಾಗಿ ಕಾಲಕಾಲಕ್ಕೆ ಸರಿಯಾಗಿ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಬೇಕು. ಪೌಷ್ಠಿಕ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.

ಸಿಸ್ಟರ್ ರುಬಿನಾ ಮಾತನಾಡಿ ಸೊಳ್ಳೆಗಳಿಂದ ಡೆಂೆ, ಚಿಕೂನ್ ಗುನ್ಯಾ, ಇತರ ಖಾಯಿಲೆಗಳು ಬರುತ್ತವೆ. ಆರೋಗ್ಯದ ಬಗ್ಗೆ ಹಚ್ಚು ಕಾಳಜಿ ವಹಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿ ಗುಣವಂತೆವ್ವ, ಆಶಾ ಕಾರ್ಯಕರ್ತರಾದ ಮಾಲತಿ ಸರ್ಜಾಪುರ, ಸುಧಾ ಜಿ.ಕೆ., ನೂರಜಹಾನ್ ಬಳ್ಳಾರಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಗರ್ಭಿಣಿಯರು, ತಾಯಂದಿರು ಪಾಲ್ಗೊಂಡಿದ್ದರು. ಮಾಲತಿ ಸರ್ಜಾಪುರ ಪ್ರಾರ್ಥಿಸಿದರು. ಸುಧಾ ಜಿ.ಕೆ. ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net