ಹಳ್ಳಕ್ಕೆ ಟ್ರ್ಯಾಕ್ಟರ್ ಉರುಳಿ ಓರ್ವ ಸಾವು

6 HVR 9
Published on

ಹಾವೇರಿ: ಮೆಕ್ಕೆಜೋಳ ತೆನೆ ಏರಿಕೊಂಡು ಹೊರಟಿದ್ದ ಸಂದರ್ಭದಲ್ಲಿ ಚಾಲನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ನಾಗನೂರ ಗ್ರಾಮದ ಬಳಿ ಸಂಭವಿಸಿದೆ.
ಗ್ರಾಮದ ಆನಂದ ಕಲ್ಲಪ್ಪ ಹಡಪದ (33) ಮೃತಪಟ್ಟವರು. ವೀರಭದ್ರಪ್ಪ ಅಕ್ಕಿವಳ್ಳಿ, ರಫೀಕ್, ಶ್ಯಾಮಣ್ಣ ಬಾಳಿಕಾಯಿ, ಇತರರು ಗಾಯಗೊಂಡವರು.
ವೀರಪ್ಪ ಪರಶೆಟ್ಟಿ ಎಂಬುವರು ಶ್ಯಾಮಣ್ಣ ಬಾಳಿಕಾಯಿ ಎಂಬುವರ ಹೊಲದಲ್ಲಿ ಟ್ರ್ಯಾಕ್ಟರ್ ಮೇಲೆ ಮೆಕ್ಕೆಜೋಳ ತುಂಬಿಕೊಂಡು ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಮೂರು ಬಾರಿ ಪಲ್ಟಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಮುಳ್ಳಿನ ಕಂಟಿ ಮೇಲೆ ಪಲ್ಟಿಯಾದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಆನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net