ನಾಗನೂರ ಗ್ರಾಮದಲ್ಲಿ ವನಮಹೋತ್ಸವ

11 HVR 2 A
Published on

ಹಾವೇರಿ: ತಾಲೂಕಿನ ನಾಗನೂರ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವದ ನರೇಗಾ ಯೋಜನೆಯಡಿಯಲ್ಲಿ ವಸುಧ ವಂದನ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ 75 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಆ.9ರಿಂದ 15ರವರೆಗೆ ಗ್ರಾಮದಲ್ಲಿ ‘ಮೇರಾ ಮಿಟ್ಟಿ ಮೇರಾ ದೇಶ’ ಕಾರ್ಯಕ್ರಮ ಜರುಗುತ್ತಿದೆ. ಇದರ ಭಾಗವಾಗಿ ವಿವಿಧ ಬಗೆಯ ಸಸಿ ನೆಡಲಾಯಿತು. ದೇಶದ ರಕ್ಷಣೆ, ಅಭಿವೃದ್ಧಿಗೆ ಕೈಜೋಡಿಸುವುದಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಗ್ರಾಪಂ ಅಧ್ಯಕ್ಷೆ ವಿದ್ಯಾ ಮಲ್ಲಿಗಾರ, ಉಪಾಧ್ಯಕ್ಷ ಮಂಜುನಾಥ ಹಿರೇಗೌಡ, ಪಿಡಿಒ ಶಿಲ್ಪಾ ಮುದ್ದಿ, ಕಾರ್ಯದರ್ಶಿ ಎಂ.ಎಂ.ಕುಂದೂರ, ಸದಸ್ಯರು, ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net