ಹಾವೇರಿ: ತಾಲೂಕಿನ ನಾಗನೂರು ಗ್ರಾಮದ ಕಲ್ಮೇಶ್ವರ ದೇವರ ರಥೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು. ಡೊಳ್ಳು ಕುಣಿತ, ಜಾಂಜ್ ಮೇಳ, ಭಜನೆ, ಕುದುರೆ ಕುಣಿತ, ಮತ್ತಿತರ ವಾದ್ಯಗಳೊಂದಿಗೆ, ಕೂಡಲ ಗುರುನಂಜೇಶ್ವರ ಮಠದ ಶ್ರೀ ಮಹೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಿತು.