ನಬಿಸಾಬ ಮೆಳ್ಳೆಗಟ್ಟಿಗೆ ಗೌರವ ಡಾಕ್ಟರೇಟ್

1 HVR 4
Published on

ಹಾವೇರಿ: ನವದೆಹಲಿಯ ದಿ ಮ್ಯಾಜಿಕ್ ಆಫ್ ಆರ್ಟ್ ಯುನಿವರ್ಸಿಟಿ ವತಿಯಿಂದ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ದೇವಿಹೊಸೂರ ನಿವಾಸಿ ಡಾ.ನಬಿಸಾಬ ಅಲ್ಲಿಸಾಬ ಮೆಳ್ಳೆಗಟ್ಟಿ ಹಾಗೂ ಡಾ.ಶಿವಯೋಗಿ ಕರಿದ್ಯಾಮಣ್ಣನವರ ಅವರನ್ನು ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಸನ್ಮಾನಿಸಿದರು.
ನಗರದಲ್ಲಿ ನಬಿಸಾಬ ಮೆಳ್ಳೆಗಟ್ಟಿ ಸ್ನೇಹ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಿದ ನಂತರ ಹೊಸಮಠದ ಶ್ರೀಗಳು ಮಾತನಾಡಿದರು. ನಬಿಸಾಬ ಹಾಗೂ ಶಿವಯೋಗಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿರುವುದು ಸಂತಸದ ವಿಷಯವಾಗಿದೆ. ಇವರಿಂದ ಮತ್ತಷ್ಟು ಉತ್ತಮ ಕೆಲಸಗಳು ಆಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ರತ್ನ ಭಾರತ ರೈತ ಸಮಾಜ ರಾಜ್ಯ ಕಾರ್ಯದರ್ಶಿ ಮಾಲತೇಶ ಪಾಟೀಲ, ಸಿ.ಎಸ್.ಮರಳಿಹಳ್ಳಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net