ಹಾವೇರಿ: ವಿವಿಧ ನಿಗಮ ಮಂಡಳಿಗಳು ಹಾಗೂ ಜಿಲ್ಲಾ, ತಾಲೂಕು ಸಮಿತಿಗಳ ನಾಮ ನಿರ್ದೇಶನದಲ್ಲಿ ಮುಸ್ಲಿಂರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲೆಯ ಕಾಂಗ್ರೆಸ್ ಪ್ರಮುಖರು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ರಾಜ್ಯ ನಿಗಮ ಮಂಡಳಿ ಹಾಗೂ ಜಿಲ್ಲಾ, ತಾಲೂಕುಗಳಲ್ಲಿ ಸರ್ಕಾರದ ನಾಮನಿರ್ದೇಶನ ಸಮಿತಿಗಳಲ್ಲಿ ಮುಸ್ಲಿಂ ಮುಖಂಡರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಪಕ್ಷದ ವರಿಷ್ಠರಿಗೆ ಆಗ್ರಹಿಸಲು ಹಾಗೂ ಜಿಲ್ಲಾ ಮಟ್ಟದ ಸಮಿತಿ ರಚಿಸಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಡಾ.ಟಿಪ್ಪುಸಾಬ ಕಲಕೋಟಿ, ಮಾಜಿ ನಗರಸಭೆ ಸದಸ್ಯ ಬಾಬುಸಾಬ ಮೋಮಿನಗಾರ, ಆ.ಎ.ಹವಾಲ್ದಾರ್, ಹಾನಗಲ್ಲ ನಗರ ಬ್ಲಾೃಕ್ ಅಧ್ಯಕ್ಷ ಮತೀನ ಶಿರಬಡಿಗಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶಾಬಾಜಖಾನ್ ಕುಲಕರ್ಣಿ, ಸುಲೇಮಾನ್ ಯಲವಿಗಿ, ಖಾದರ್‌ಸಾಬ ಗಡ್ಡದ, ಖಲೀಲಸಾಬ ಖಾಜಿ, ಹುಸೇನಸಾಬ ಬ್ಯಾಡಗಿ, ಎಂ.ಎ.ನೆಗಳೂರ ವಕೀಲರು, ರಿಯಾಜ್ ಅಹ್ಮದ ಶಿಡಗನಾಳ ಕುರ್ಶಿದ ಅಹ್ಮದ ಹುಲ್ಲತ್ತಿ, ಸನಾವುಲ್ಲಾ ಮಕಾನದಾರ, ಎಚ್.ಎಂ.ಸೊರಟೂರ, ಡಿ.ಸಿ. ನದಾಫ, ಮಲ್ಲಿಕ ನಾಶಿಪುಡಿ, ಎಂ.ಕೆ.ನದಾಫ, ಅಬ್ದುಲ್‌ಗನಿ ಪಾಳಾ, ಪಯಾಜ್‌ಅಹ್ಮದ ಲೊಹಾರ, ಹಸನಸಾಬ ಬಾಲೆಬಾಯಿ, ರಿಯಾಜ್‌ಅಹ್ಮದ ರಾಣೆಬೆನ್ನೂರ, ಖಾದರ್‌ಸಾಬ ನದಾಫ, ಸಾಯಿಲ್ ಕಮಡೊಳ್ಳಿ, ಇಮಾಮಹುಸೇನ ಬುಕೆಟ್‌ಗಾರ, ಸೈಪುಲ್ಲಾ ಕಮಗಾಲ, ಮಕ್ಬುಲ ಬಾಲೆಬಾಯಿ, ಪೀರ್‌ಸಾಬ ಹಾನಗಲ್ಲ, ಇತರರಿದ್ದರು.