

ಹಾವೇರಿ: ಇಲ್ಲಿನ ನಗರಸಭೆ ವತಿಯಿಂದ ಐದಾರು ತಿಂಗಳ ಹಿಂದೆಯೇ 46 ಲಕ್ಷ ರೂ. ಕೊಟ್ಟ ಖರೀದಿಸಿದ್ದ 32,350 ಕಸದ ಡಬ್ಬಿಗಳನ್ನು ನಗರದ ಮನೆ ಮನೆಗೆ ವಿತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ.
ಆ.9ರಂದು ನಗರದ ಕಮಲಾ ಕಲ್ಯಾಣ ಮಂಟಪದಲ್ಲಿ ವಿಧಾಣಸಭೆ ಉಪಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರಿಂದ ಕಸದ ಡಬ್ಬಿ ವಿತರಣೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ನಂತರ ನಗರಸಭೆ ವ್ಯಾಪ್ತಿಯ 16,175 ಮನೆಗಳಿಗೂ ತಲಾ ಎರಡೆರೆಡು ಕಸದ ಡಬ್ಬಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಅವುಗಳ ಮೂಲಕ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಕಸ ಸಂಗ್ರಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಡಿ.ದೇವರಾಜ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
‘ಕಸದ ಡಬ್ಬಿ ಮೂಲೆಗೆ.. ತ್ಯಾಜ್ಯ ಬೀದಿಗೆ’ ಎಂಬ ಶೀರ್ಷಿಕೆಯಡಿ ಆ.3ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಮೂಲೆ ಸೇರಿದ್ದ ಡಸ್ಟ್‌ಬಿನ್‌ಗಳ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ.