ನಿವೇಶನ ಸ್ವಚ್ಛಗೊಳಿಸಿ ಆಸ್ತಿ ಮೇಲೆ ಭೋಜಾ ದಾಖಲು

19 HVR 3
Published on

ಹಾವೇರಿ: ಹಾವೇರಿ ನಗರಸಭೆ ವ್ಯಾಪ್ತಿಯ ಬಸವೇಶ್ವರ ನಗರ ಎ-ಬ್ಲಾಕ್ 14ನೇ ಕ್ರಾಸ್‌ನಲ್ಲಿ ಕರಡಿಯವರ ಮಾಲಿಕತ್ವದ ನಿವೇಶನದ ಜಾಗದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ನಗರಸಭೆ ವತಿಯಿಂದ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛಗೊಳಿಸಿದ ವೆಚ್ಚವನ್ನು ಆಸ್ತಿಯ ಮೇಲೆ ಭೋಜಾ ದಾಖಲಿಸಲಾಗಿದೆ.
ಗಿಡ-ಗಂಟಿ ಬೆಳೆದ ನಿವೇಶನ ಮಾಲೀಕರಿಗೆ ಸ್ವಚ್ಛಗೊಳಿಸುವಂತೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಲಾಗಿತ್ತು. ಮೂರು ಬಾರಿ ನೋಟಿಸ್ ನೀಡಿದ್ದರೂ ಸ್ವಚ್ಛತೆಗೆ ನಿರ್ಲಕ್ಷ್ಯವಹಿಸಿದ ಮಾಲೀಕರ ಆಸ್ತಿ ಮೇಲೆ ಭೋಜಾ ದಾಖಲಿಸಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net