ಪಿಟಿಸಿಎಲ್ ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಆ.27ರಂದು

Published on

ಹಾವೇರಿ: ಮುಕ್ತ ಸಂವಾದ ವೇದಿಕೆ ವತಿಯಿಂದ ಆ.27ರಂದು ಬೆಳಗ್ಗೆ 10 ಗಂಟೆಗೆ ನಗರದ ಪಿಬಿ ರಸ್ತೆಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ವೇದಿಕೆಯ 10ನೇ ರಾಜ್ಯ ಸಮ್ಮೇಳನ ಹಾಗೂ ಪಿಟಿಸಿಎಲ್ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ) ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾ ಸಂಚಾಲಕ ಮಂಜುನಾಥ ಕರ್ಜಗಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯದ ಜನರಿಗೆ ಸರ್ಕಾರದಿಂದ ಬರುವ ಯೋಜನೆ ಹಾಗೂ ಕಾಯ್ದೆಗಳ ಅರಿವು ಇಲ್ಲದ ಕಾರಣ ಸಮರ್ಪಕವಾಗಿ ಅವರಿಗೆ ತಲುಪುತ್ತಿಲ್ಲ. ಏಜೆಂಟರು ಹಾಗೂ ಅನುಕೂಲಸ್ಥರ ಶೋಷಣೆಯಿಂದಾಗಿ ಸರಿಯಾಗಿ ಜಾರಿಯಾಗುತ್ತಿಲ್ಲ. ಪಿಟಿಸಿಎಲ್ ಕಾಯ್ದೆ ಮರು ತಿದ್ದುಪಡಿ ಕಾನೂನು 2023ರಲ್ಲಿ ಮತ್ತೆ ಜಾರಿಗೆ ಬಂದಿದೆ. ಈ ಕುರಿತು ಸಮಾವೇಶದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ವಕೀಲರಾದ ರಾಮನಗರದ ಮಂಜುನಾಥ, ಪ್ರೊ.ಹರಿರಾಮ, ಮಹೇಶದಾಸ, ಎಚ್.ಎಲ್.ವೆಂಕಟೇಶ, ಶಿವರುದ್ರಪ್ಪ, ಸಿಸ್ಟರ್ ಅನಿತಾ ಡಿಸೋಜಾ, ಶೋಭಾ ಎಚ್.ಎಂ. ಸುವರ್ಣಾ ಎಂ. ಭಾಗವಹಿಸಲಿದ್ದಾರೆ. ದಲಿತ, ಧಮನಿತ, ಶೋಷಿತ ಸಮುದಾಯದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಶಂಭು ಕಳಸದ, ಚಂದ್ರಪ್ಪ ಸನದಿ, ಮಂಜುನಾಥ ಕಚವಿ, ಚಂದ್ರಪ್ಪ ಎಮ್ಮಿಗನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net