ರಾಜಕಾಲುವೆ ಸ್ವಚ್ಛತೆಗೆ 10 ಕೋಟಿ ಬಿಡುಗಡೆ ಮಾಡಿ; ಎಂ.ಎಸ್.ಕೋರಿಶೆಟ್ಟರ್ ಆಗ್ರಹ

17 HVR 3 B
Published on

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಗರದ ರಾಜ ಕಾಲುವೆ ಹಾಗೂ ಕಾಲುವೆಗಳ ಸ್ವಚ್ಛತೆ ಹಾಗೂ ದುರಸ್ಥಿಗಾಗಿ ತಕ್ಷಣವೇ 10 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಕೋರಿಶೆಟ್ಟರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಪಿಬಿ ರಸ್ತೆಯಲ್ಲಿದ್ದ ನೂರಾರು ವರ್ಷದ ಗಟ್ಟಿಮುಟ್ಟಾದ ಆಲದ ಮರ ಕಡಿದಿರುವುದು ತಪ್ಪು. ಕಳೆದ 25 ವರ್ಷಗಳಿಂದ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಎಂದು ಮನವಿ ಕೊಟ್ಟರೂ ನಗರಸಭೆ ನಿರ್ಲಕ್ಷೃ ವಹಿಸಿದೆ. ಮಳೆ ಬಂದಾಗ, ಅನಾಹುತ ಆದಾಗ ಹೊರಗೆ ಬರುವ ಅಧಿಕಾರಿಗಳು, ನಂತರ ಗಪ್‌ಚುಪ್ ಆಗುತ್ತಾರೆ.
ಈ ಹಿಂದೆ 2015ರಲ್ಲಿ ಸಿದ್ದರಾಮಯ್ಯ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್‌ನಲ್ಲಿ 50 ಕೋಟಿ ರೂ. ಘೋಷಿಸಿದ್ದರು. ಆಗ ಸರಿಯಾಗಿ ಕಾಲುವೆಗಳ ಕಾಮಗಾರಿ ಮಾಡದ ಕಾರಣ ಬಾಲಕ ಮೃತಪಟ್ಟಿದ್ದಾನೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಕೂಡಲೇ ಪ್ರಕೃತಿ ವಿಕೋಪದ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net