ಹಾವೇರಿ: ಇಲ್ಲಿನ ಶಿವಾಜಿ ನಗರದ ಎಂಆರ್‌ಎಂ ರೆಸಿಡೆನ್ಸಿಯಲ್ ಸ್ಕೂಲ್‌ನ ವಿದ್ಯಾರ್ಥಿಗಳು 2024-25ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡು ಸಾಧನೆಗೈದಿದ್ದಾರೆ.
ವಿಶಾಲಾಕ್ಷಿ ಎಸ್. ಜಾಂಬೋಟಿ (ಶೇ.91.68) ಶಾಲೆಗೆ ಪ್ರಥಮ ಸ್ಥಾನ, ಸೃಷ್ಟಿ ಆರ್.ಕೋರಿಶೆಟ್ಟರ್ (ಶೇ.84.32) ದ್ವಿತೀಯ ಹಾಗೂ ಅಕ್ಷಯ ಎಸ್. ಅಂಚಿ (ಶೇ.81.60) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್ ಡಾ.ರಾಮ ಮೋಹನ ರಾವ್, ಪ್ರಾಂಶುಪಾಲೆ ಅಕ್ಷತಾ ಪಿ. ಸುರಪುರಮಠ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.