ಹಾವೇರಿ ರೈಲು ನಿಲ್ದಾಣ ಪರಿಶೀಲಿಸಿದ ಬೊಮ್ಮಾಯಿ

7 HVR 10 A
Published on

ಹಾವೇರಿ: ಹಾವೇರಿ ಹಾಗೂ ಬ್ಯಾಡಗಿ ರೈಲು ನಿಲ್ದಾಣಗಳಿಗೆ ಸೋಮವಾರ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲಿಸಿದರು.

ಹಾವೇರಿ ರೈಲು ನಿಲ್ದಾಣದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದರು. ಹಿರಿಯ ನಾಗರಿಕರ ಸಹಾಯಕ್ಕಾಗಿ ಎಸ್ಕಲೇಟರ್ ನಿರ್ಮಿಸಲು ಕ್ರಮ ಕೈಗೊಳ್ಳಿ, ಪ್ಲಾಟ್‌ಫಾರ್ಮ್‌ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ವೇಟಿಂಗ್ ರೂಮ್, ಸಸ್ಯಾಹಾರಿ, ಶಾಖಾಹಾರಿ ಹೋಟೆಲ್, ಪುಸ್ತಕ ಮಳಿಗೆ, ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಸಂಸದರಲ್ಲಿ ಮನವಿ ಮಾಡಿದರು. ಪ್ರಯಾಣಿಕರ ಬೇಡಿಕೆ ಅನುಗುಣವಾಗಿ ನಿಲ್ದಾಣದಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿ ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಬಸವರಾಜ ಅರಬಗೊಂಡ, ನಾಗೇಂದ್ರ ಕಟಕೋಳ, ಎಂಎಸ್ ತಿಪ್ಪಶೆಟ್ಟಿ, ಅಬ್ದುಲ್ ಹುಬ್ಬಳ್ಳಿ, ಬಸವರಾಜ ತಟಪಟ್ಟಿ, ವಿಜಯಕುಮಾರ ಚಿನ್ನಿಕಟ್ಟಿ, ಡಿ.ಎಸ್.ಮಾಳಗಿ, ಗಿರೀಶ ತುಪ್ಪದ, ಜಗದೀಶ ಮಲಗೊಡ, ಸುರೇಶ ಹೊಸಮನಿ, ಪ್ರಭು ಹಿಟ್ನಳ್ಳಿ, ರಾಜು ದುರ್ಗದ, ಉಳಯಪ್ಪ ದುರ್ಗದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net