ದಾಖಲೆ ಇಲ್ಲದ 75 ಲಕ್ಷ ರೂ. ವಶಕ್ಕೆ; ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಚೆಕ್‌ಪೋಸ್ಟ್‌ನಲ್ಲಿ ಪತ್ತೆ

16 HVR 8 D
Published on

ಹಾವೇರಿ: ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 75 ಲಕ್ಷ ರೂ. ನಗದನ್ನು ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ವಶಪಡಿಸಿಕೊಳ್ಳಲಾಗಿದೆ.
ಸ್ವಿಫ್ಟ್ ಡಿಸೈರ್ ವಾಹನದಲ್ಲಿ ಸಮರ್ಪಕವಾದ ದಾಖಲೆಗಳಿಲ್ಲದೇ 75 ಲಕ್ಷ ರೂ. ನಗದು ಸಾಗಿಸಲಾಗುತ್ತಿತ್ತು. ಮೋಟೆಬೆನ್ನೂರ ಚೆಕ್‌ಪೋಸ್ಟ್ ಸಿಬ್ಬಂದಿ ವಾಹನ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಬ್ಯಾಡಗಿ ಫ್ಲೈಯಿಂಗ್ ಸ್ಕ್ವಾಡ್ ತಂಡ ಹಣ ಜಪ್ತಿ ಮಾಡಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net