

ಹಾವೇರಿ: ಯುವತಿಯೊಬ್ಬಳಿಗೆ ಗೂಗಲ್ ಮ್ಯಾಪ್ ರೇಟಿಂಗ್ ಕುರಿತು ತಿಳಿಸಿ ಒಂದು ರೇಟಿಂಗ್ಗೆ 25-50 ರೂ.ನಂತೆ ಲಾಭಾಂಶ ಕೊಡುವುದಾಗಿ ಹೇಳಿ 2.32 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಚಿತ್ರಾ ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಯಾರೋ ಅಪರಿಚಿತ ವ್ಯಕ್ತಿ ಫೋನ್ ಮಾಡಿ ಯಾವುದೋ ಒಂದು ಲಿಂಕ್ ಓಪನ್ ಮಾಡಿಸಿ ಗೂಗಲ್ ಮ್ಯಾಪ್ ರೇಟಿಂಗ್ ಕುರಿತು ಮಾಹಿತಿ ನೀಡಿದ್ದಾನೆ. ಅಲ್ಲದೆ ಒಂದು ರೇಟಿಂಗ್ಗೆ 25-50 ರೂ. ಕೊಡುತ್ತೇನೆ ಎಂದು ನಂಬಿಸಿ 2.32 ಲಕ್ಷ ರೂ. ಅನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.