ಬೊಮ್ಮಾಯಿಗೆ ಪತ್ರದ ಮೂಲಕ ಶುಭ ಕೋರಿದ ಪ್ರಧಾನಿ ಮೋದಿ

1.86.0-T6YDYUVAVMC3HAKHXIQ7GXTCL4.0.1-4
1.86.0-T6YDYUVAVMC3HAKHXIQ7GXTCL4.0.1-4
Published on

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ 65ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವರಾಜ ಬೊಮ್ಮಾಯಿಯವರಿಗೆ ಪತ್ರದ ಮೂಲಕ ಶುಭ ಕೋರಿದ್ದಾರೆ.

ಜನ್ಮದಿನ ಎನ್ನುವುದು ಜೀವನದ ಅನುಭವದ ಸ್ಪೂರ್ತಿ ಪಡೆದು ಭವಿಷ್ಯದ ಕಡೆಗೆ ನಡೆಯುವ ಸುಸಂದರ್ಭ. ಈ ದಿನ ದೇಶ ಮತ್ತು ಸಮಾಜದ ಏಳ್ಗೆಗಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಹೊಸ ಸ್ಪೂರ್ತಿ ಮತ್ತು ಶಕ್ತಿ ನೀಡುತ್ತದೆ.

ದೇಶದ ಅಮೃತ ಕಾಲದ ಈ ಸಂದರ್ಭದಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಕಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ರಾಜ್ಯದ ಪ್ರಗತಿಗೆ ನಿಮ್ಮ ಅಭೂತಪೂರ್ವ ಕೊಡುಗೆ ಶ್ಲಾಘನೀಯವಾಗಿದೆ. ನಿಮ್ಮ ಜೀವನದಲ್ಲಿ ಸದಾ ಶಾಂತಿ, ಸಂತೋಷ, ನೆಮ್ಮದಿ ತುಂಬಿರಲಿ ಎಂದು ಪ್ರಧಾನಿ ಮೋದಿ, ಬೊಮ್ಮಾಯಿ ಅವರಿಗೆ ಪತ್ರದಲ್ಲಿ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net