ಮೋದಿ ಪ್ರದರ್ಶಿನಿ ದರ್ಶನ, ರಕ್ತದಾನ ಶಿಬಿರ

18 HVR 5 A
Published on

ಹಾವೇರಿ: ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಗುರುವಾರ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಪ್ರದರ್ಶಿನಿ ಹಾಗೂ ರಕ್ತದಾನ ಶಿಬಿರವನ್ನು ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಗವಿಸಿದ್ದಪ್ಪ ದ್ಯಾಮಣ್ಣನವರ ಉದ್ಘಾಟಿಸಿದರು.

ನರೇಂದ್ರ ಮೋದಿ ಅವರ ಜೀವನದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅವರ ಬಾಲ್ಯದ ಜೀವನ ಹಾಗೂ ಸಂಘದ ಪ್ರಚಾರಕರಾಗಿ ಕೈಗೊಂಡ ರಾಷ್ಟ್ರ ಸೇವಾ ಕಾರ್ಯ ಹಾಗೂ ಗುಜರಾತಿನ ಮುಖ್ಯಮಂತ್ರಿಯಾಗಿ ಗುಜರಾತನ್ನು ಅಮೋಘ ರೀತಿ ಬದಲಾವಣೆ ಮಾಡಿದ ಕಾರ್ಯವೈಖರಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ನಡೆಸಿದ ಅಭಿವೃದ್ಧಿ ಪರ್ವದ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಪ್ರದರ್ಶಿನಿ ಮೂಲಕ ಜನರಿಗೆ ತಿಳಿಸಲಾಯಿತು.

ರಾಷ್ಟ್ರೋತ್ತಾನ ರಕ್ತಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 45 ಕಾರ್ಯಕರ್ತರು ರಕ್ತದಾನ ಮಾಡಿದರು. ಅಭಿಯಾನದ ಜಿಲ್ಲಾ ಸಂಚಾಲಕ ಸಂತೋಷ ಆಲದಕಟ್ಟಿ, ರಕ್ತದಾನ ಶಿಬಿರದ ಜಿಲ್ಲಾ ಸಂಚಾಲಕ ಕಿರಣ ಕೋಣನವರ, ಪ್ರದರ್ಶಿನಿ ಜಿಲ್ಲಾ ಪ್ರಮುಖ ನೀಲಪ್ಪ ಪಿ.ಚಾವಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಜಿಲ್ಲಾ ವಕ್ತಾರ ಪರಮೇಶಪ್ಪ ಮೇಗಳಮನಿ, ಗಿರೀಶ ತುಪ್ಪದ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net