

ಸವಣೂರ: ಯಲ್ಲಾಪುರ ಬಳಿ ಲಾರಿ ಅಪಘಾತದಲ್ಲಿ ಮೃತಪಟ್ಟವರ ಸವಣೂರ ಪಟ್ಟಣದ ಮನೆಗಳಿಗೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು ಹಾಗೂ ವೈಯುಕ್ತಿಕವಾಗಿ ಧನ ಸಹಾಯ ಮಾಡಿದರು. ಶಾಸಕ ಯಾಸೀರ್ ಖಾನ್ ಪಠಾಣ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಝೀಶಾನ್ ಖಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಮಕಂದರ್, ವಕ್ಫ್ ಬೋರ್ಡ್ ಸದಸ್ಯ ಮುನ್ನಾ ಗುಲ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಅಶೋಕ, ದುರ್ಗಪ್ಪ ನೀರಲಗಿ, ಜಮೀರ್ ಜಿಗರಿ, ಇತರರಿದ್ದರು.