ಶಾಸಕ ರುದ್ರಪ್ಪ ಲಮಾಣಿ ನಾಪತ್ತೆ ಆರೋಪ, ರೈಲು ಟಿಕೆಟ್ ಬುಕ್

25 Rudrappa Lamani Railway Ticket
Published on

ಹಾವೇರಿ: ವಿಧಾನಸಭೆ ಉಪಾಧ್ಯಕ್ಷ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಕಾಣೆಯಾಗಿದ್ದಾರೆ ಎಂದು ಆರೋಪಿಸಿರುವ ಕ್ಷೇತ್ರದ ಕೆಲ ಮತದಾರರು ಶಾಸಕರಿಗೆ ರೈಲು ಪ್ರಯಾಣದ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿ ಸ್ವಾಗತ ಕೋರಿದ್ದಾರೆ.

ಹಲವು ದಿನಗಳಿಂದ ಜಿಲ್ಲೆ ಸೇರಿದಂತೆ ಕ್ಷೇತ್ರದಾದ್ಯಂತ ಅತಿಯಾದ ಮಳೆಯಿಂದ ಅನೇಕ ಸಂಕಷ್ಟ ಎದುರಾಗಿದೆ. ಹಾವೇರಿ ನಗರದಲ್ಲಿ ಚರಂಡಿಯಲ್ಲಿ ಬಾಲಕನೊಬ್ಬ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಇಷ್ಟೆಲ್ಲ ಅವಾಂತರ ಸೃಷ್ಟಿಯಾದರೂ ಶಾಸಕ ರುದ್ರಪ್ಪ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಿರುವ ಮತದಾರರು ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಶಾಸಕರು ಹಾವೇರಿಗೆ ಬರುತ್ತಿಲ್ಲ. ಹಾಗಾಗಿ, ಬೆಂಗಳೂರಿನಿಂದ ಅ.25ರಂದು ಡಿ9ಬೋಗಿಯಲ್ಲಿ 37ನೇ ಸೀಟನ್ನು ರುದ್ರಪ್ಪ ಲಮಾಣಿ ಹೆಸರಲ್ಲಿ ಕಾಯ್ದಿರಿಸಿದ್ದಾರೆ. ಈ ಟಿಕೆಟ್‌ಅನ್ನು ಲಮಾಣಿ ಮೊಬೈಲ್‌ಗೆ ಕಳುಹಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಶಾಸಕರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net