ವಿಷಾದ ವ್ಯಕ್ತಪಡಿಸಿದ ಶಾಸಕ ಓಲೇಕಾರ

Published on

ಹಾವೇರಿ: ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನೆಹರು ಓಲೇಕಾರ ಸಿಎಂ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಪ್ರತಿಭಟನೆಯ ಬಿಸಿ ಹೆಚ್ಚಾಗುತ್ತಿದ್ದಂತೆ ಶಾಸಕ ನೆಹರು ಓಲೇಕಾರ ಭಾನುವಾರ ಸಿಎಂ ವಿರುದ್ಧದ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
'ನಿನ್ನೆ ದಿವಸ ಕಾರ್ಯಕರ್ತರ ಸಭೆ ಕರೆದಾಗ ಆವೇಷಗೊಂಡ ಕಾರ್ಯಕರ್ತರ ಮಾತು ಹಾಗೂ ನಾನು ಆವೇಷಗೊಂಡ ಸಂದರ್ಭದಲ್ಲಿ ಮಾತನಾಡುವಾಗ ಏನಾದರೂ ಲೋಪದೋಷ ಆಗಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಯಾವುದೇ ಸಮಾಜದ ವಿರುದ್ಧ ಇಲ್ಲ. ಎಲ್ಲ ಸಮಾಜವನ್ನು ಪ್ರೀತಿಸುತ್ತೇನೆ. ಗೌರವಿಸುತ್ತೇನೆ. ಹೀಗಾಗಿ, ನಾನು ಆವೇಷದಲ್ಲಿ ಮಾತನಾಡಿದ್ದನ್ನು ದೊಡ್ಡದಾಗಿ ಮಾಡುವ ಯಾವುದೇ ಅವಶ್ಯಕತೆ ಇಲ್ಲ' ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net