ಹಾನಗಲ್ಲಗೆ ಮಂಡಿಗೆ, ಬ್ಯಾಡಗಿಗೆ ಸಿಹಿ ಮೆಣಸು

Shivannanavar, Mane
Published on

ಹಾವೇರಿ: ಬಹುನಿರೀಕ್ಷಿತ ನಿಗಮ ಮಂಡಳಿ ಅಧ್ಯಕ್ಷರ ಘೋಷಣೆಯನ್ನು ಕಾಂಗ್ರೆಸ್ ಪಕ್ಷ ಗುರುವಾರ ಕೊನೆಗೂ ಪ್ರಕಟಿಸಿದೆ.

ಪಟ್ಟಿಯಲ್ಲಿ ಜಿಲ್ಲೆಯ ಬ್ಯಾಡಗಿ ಶಾಸಕ ಹಾಗೂ ಸಿಎಂ ಆಪ್ತರಾದ ಬಸವರಾಜ ಶಿವಣ್ಣನವರ ಹಾಗೂ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಬಸವರಾಜ ಶಿವಣ್ಣನವರಗೆ ಮಹತ್ವದ ಅರಣ್ಯ ಅಭಿವೃದ್ಧಿ ನಿಗಮ ನಿಗಮದ ಅಧ್ಯಕ್ಷ ಸ್ಥಾನ ದೊರೆತಿದ್ದು, ಶಾಸಕ ಶ್ರೀನಿವಾಸ ಮಾನೆ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net