ಈ ಬಾರಿಯೂ ನನಗೇ ಟಿಕೆಟ್ ಸಿಗುತ್ತದೆ; ನೆಹರು ಓಲೇಕಾರ

MLA Neharu Neharu 2
Published on

ಹಾವೇರಿ: ಈ ಹಿಂದೆ 16 ಜನ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೇಳಿದ್ದರು. ಈಗ 6 ಜನ ಟಿಕೆಟ್ ಕೇಳುತ್ತಿದ್ದಾರೆ. ಕ್ಷೇತ್ರದಲ್ಲಿ ತಾವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಬಾರಿಯೂ ನನಗೇ ಟಿಕೆಟ್ ಸಿಗುತ್ತದೆ. ಯಾವುದೇ ಕಾರಣಕ್ಕೂ ನಾನು ಚಂಚಲ ಆಗುವುದಿಲ್ಲ ಎಂದು ಶಾಸಕ ನೆಹರು ಓಲೇಕಾರ ಭರವಸೆ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಟಿಕೆಟ್ ಕೇಳಿದವರಿಗೆ, ‘ಪ್ರಯತ್ನಿಸಿ, ಆಗದಿದ್ದರೆ ಕಾಂಗ್ರೆಸ್‌ಗೆ ಬೆಂಬಲಿಸಬೇಡಿ’ ಎಂದಿದ್ದೆ. ಕೆಲವರು ದುಡ್ಡು ಪಡೆದು ಪಕ್ಷದ ವಿರುದ್ಧ ಕೆಲಸ ಮಾಡಿದರು. ಹೈಕಮಾಂಡ್ ಎಲ್ಲ ಪರಿಶೀಲಿಸಿ ಟಿಕೆಟ್ ಕೊಡುತ್ತದೆ. ನಮ್ಮ ನಾಯಕರು ನನ್ನನ್ನು ಬಿಟ್ಟುಕೊಡುವುದಿಲ್ಲ ಎಂದರು.
ನಿಮ್ಮ ವಿರುದ್ಧ ನ್ಯಾಯಾಲಯ ತೀರ್ಪು ನೀಡಿರುವುದು ಚುನಾವಣೆಯಲ್ಲಿ ಹಿನ್ನೆಡೆ ಆಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಓಲೇಕಾರ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಆ ತೀರ್ಪಿಗೆ ತಡೆಯಾಜ್ಞೆ ತಂದಿದ್ದೇವೆ. ಅದರಿಂದ ಏನೂ ತೊಂದರೆ ಆಗುವುದಿಲ್ಲ ಎಂದು ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪರಮೇಶ್ವರ ಮೇಗಳಮನಿ, ಶಶಿಧರ ಹೊಸಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net