ಶಾಸಕ ಓಲೇಕಾರ ಅಂತಿಮ ನಿರ್ಧಾರ ಇಂದು

Published on

ಹಾವೇರಿ: ಭಾನುವಾರ ಶಿರಸಿಗೆ ತೆರಳಿ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದ ನೆಹರು ಓಲೇಕಾರ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಶಿರಸಿಗೆ ತೆರಳಲಿಲ್ಲ. ಜೆಡಿಎಸ್‌ಗೆ ಸೇರುವ ಸುಳಿವು ನೀಡಿದ್ದರೂ ಸಹ ಬಿಜೆಪಿಯಲ್ಲೇ ಉಳಿಯಲು ಕೆಲವರಿಂದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ನೆಹರು ಗೊಂದಲದಲ್ಲಿದ್ದು ಬೆಂಬಲಿಗರೊಂದಿಗೆ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬೆಂಬಲಿಗರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net