ಸಚಿವರ ಸಭೆಗೆ ಕಬ್ಬು ಹೊತ್ತು ತಂದ ರೈತರು, ಸಿಹಿ ಕೊಡಿ ವಿಷ ಕೊಡಬೇಡಿ ಎಂದು ಮನವಿ

2 HVR 3 B
Published on

ಹಾವೇರಿ: ಕಬ್ಬಿನ ಸಿಹಿ ಕೊಡುವ ನಮಗೆ ಸಿಹಿ ಕೊಡಿ. ವಿಷ ಕೊಡಬೇಡಿ ಎಂದು ಸಚಿವರಾದ ಕೃಷ್ಣಭೈರೇಗೌಡ ಹಾಗೂ ಶಿವಾನಂದ ಪಾಟೀಲರ ಎದುರು ರೈತರು ಕಷ್ಟ ತೊಡಿಕೊಂಡರು. ಬೆಳೆದ ಕಬ್ಬು ಹೊತ್ತು ಸಭೆಗೆ ತಂದ ರೈತರು ಸಚಿವರ ಎದುರಲ್ಲಿ ಇಟ್ಟು ತಮ್ಮ ಅಳಲು ತೋಡಿಕೊಂಡರು.

ಕಬ್ಬು ಬೆಳೆಗೆ ಯೋಗ್ಯ ದರ ನಿಗದಿ ಮಾಡುವಂತೆ ಪಟ್ಟು ಹಿಡಿದರು. ದಕ್ಷಿಣ ಕರ್ನಾಟಕ, ಬೆಳಗಾವಿ ಫ್ಯಾಕ್ಟರಿಗಂಳತೆ ಎಫ್ ಆರ್ ಪಿ ದರಕ್ಕಿಂತ ಹೆಚ್ಚು ದರ ಟನ್ ಗೆ ಕನಿಷ್ಠ 3500 ರೂ. ಕೊಡುವಂತೆ ಒತ್ತಾಯಿಸಿದರು.

ಉತ್ತರ ಕರ್ನಾಟಕ ಭಾಗದ ರೈತರಿಗೆ ಯೋಗ್ಯ ಎಫ್ ಆರ್ ಪಿ ರೇಟ್ ನೀಡುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net