ಸ್ವಾಮೀಜಿಗಳ ಮಾತು ಅಲ್ಲೇ ಕೇಳಿ ಅಲ್ಲೇ ಬಿಡಬೇಕು; ಸಚಿವ ಶಿವಾನಂದ ಪಾಟೀಲ ಹೇಳಿಕೆ

Shivanand Patil 2
Published on

ಹಾವೇರಿ: ಸಿಎಂ ಬದಲಾವಣೆ ಕುರಿತು ಒಬ್ಬರು ಸ್ವಾಮೀಜಿ ಮಾತನಾಡಿದರೆ ರಾಜಕಾರಣ ಆಗುತ್ತಾ ? ಸ್ವಾಮೀಜಿಗಳ ಮಾತು ಅಲ್ಲೇ ಕೇಳಿ ಅಲ್ಲೇ ಬಿಡಬೇಕು. ಆದರೆ, ಸ್ವಾಮೀಜಿಗಳು ರಾಜಕಾರಣ ಮಾತನಾಡಬಾರದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ವಿಚಾರಗಳನ್ನು ಅವರು ಹೇಳಿದ್ದಾರೆ. ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ. ಅದು ಆಗೋದಾ? ಹೋಗೋದಾ? ಎಂದು ಮರುಪ್ರಶ್ನಿಸಿದರು.
ಯಾರು ಅವರನ್ನು ಬಳಸಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಸ್ವಾಮೀಜಿಯವರು ರಾಜಕಾರಣ ಮಾತನಾಡಬಾರದು. ರಾಜಕಾರಣಿ ಮಾತನಾಡಿದರೆ ಅದಕ್ಕೊಂದು ಬೆಲೆ ಇದೆ. ಈ ಬೆಳವಣಿಗೆ ಸರ್ಕಾರ ಪಥನದ ಮುನ್ನುಡಿಯಾಗಲು ಸಾಧ್ಯವೇ ಇಲ್ಲ ಎಂದರು.
ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಗೆ ಕಾರ್ಯಕರ್ತರ ಸಲಹೆಯ ಮೇರೆಗೆ ಪಕ್ಷ ಯಾರಿಗೆ ನಿರ್ಣಯ ಮಾಡುತ್ತದೋ ಅವರಿಗೆ ಟಿಕೆಟ್. ನಾವೆಂದೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಾನಿದ್ದಾಗ ಅದು ಆಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net