ಹಾವೇರಿ ನಗರಸಭೆ ಕಮಿಷನರ್‌ಗೆ ಮತ್ತೆ ಕ್ಲಾಸ್; ನಿನ್ನ ಬಗ್ಗೆ ಅಭಿಪ್ರಾಯ ಸರಿಯಿಲ್ಲ; ಸಚಿವ ಶಿವಾನಂದ ಪಾಟೀಲ ಗರಂ

13 HVR 1 B
Published on

ಹಾವೇರಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಿನ್ನ ಬಗ್ಗೆ ಅಭಿಪ್ರಾಯ ಸರಿಯಲ್ಲ. ಮುಲ್ಲಾನ ಕೆರೆಗೆ ಚರಂಡಿ ನೀರು ಹರಿಯುವುದನ್ನು ತಡೆದಿದ್ದೀಯಾ ? ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅಕ್ಕಮಹಾದೇವಿ ಕೆರೆಗೆ ಬುಧವಾರ ಭೇಟಿ ನೀಡಿದ ಸಚಿವರು ಹೆಗ್ಗೇರಿ ಕೆರೆಯಿಂದ ನೀರು ಹರಿಸುವ ಯೋಜನೆ ಪರಿಶೀಲನೆ ಮಾಡಿದರು. ನಗರಸಭೆ ಆಯುಕ್ತರ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರು ಕೊಡುವ ಯೋಗ್ಯತೆ ನಿನಗೆ ಇಲ್ಲ. ನೀನು ನಗರವನ್ನು ಹೇಗೆ ಅಭಿವೃದ್ಧಿ ಮಾಡುತ್ತೀಯಾ ? ಇದೆಲ್ಲಾ ನಾನು, ಜಿಲ್ಲಾಧಿಕಾರಿ ಮಾಡುವ ಕೆಲಸವಾ ? ನೀನು ಏನು ಮಾಡುತ್ತೀಯಾ. ನಿಮ್ಮ ಮೇಲಧಿಕಾರಿ (ಡಿಎಂ)ಗೆ ಪತ್ರ ಬರೆದಿದ್ದೇನೆ ಎಂದು ಹರಿಹಾಯ್ದರು.
ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಎಸ್‌ಪಿ ಸಿ.ಗೋಪಾಲ, ಸಂಜೀವಕುಮಾರ ನೀರಲಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net