

ಹಾವೇರಿ: ತಾಲೂಕಿನ ಮೇವುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯೋಗ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ದೈಹಿಕ ಶಿಕ್ಷಕ ಆರ್.ಎಚ್.ಶಂಕಿನದಾಸರ ಏಳು ದಿನಗಳ ಕಾಲ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಯೋಗಾಸನಗಳನ್ನು ಹೇಳಿಕೊಟ್ಟರು. ಇತ್ತೀಚೆಗೆ ಜರುಗಿದ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವಾನಂದಪ್ಪ ಕರೆಮ್ಮನವರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಚ್.ಶಂಕಿನದಾಸರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮುಖ್ಯೋಪಾಧ್ಯಾಯ ವೀರೇಶ ಗಡ್ಡದ್ದೇವರಮಠ, ಸಿಆರ್‌ಪಿ ಮೈತ್ರಾ ಪುಟ್ಟಣ್ಣನವರ, ಶಿಕ್ಷಕರಾದ ಎಸ್.ಎಂ.ಬಶೆಟ್ಟಿ, ಆರ್.ಕೆ ಕಬ್ಬಾರಣ್ಣನವರ, ಗಂಗಮ್ಮ ಎಚ್., ಬಸವರಾಜ ಪೂಜಾರ, ಮೊಂಜುನಾಥ ಕೆಂಚಮಲ್ಲ , ನೀಲಮ್ಮ ದ್ಯಾವನಗೌಡ್ರ, ಪ್ರದೀಪ ವಿಜಾಪೂರ, ಪ್ರೀತಿ ಭೋಸಲೆ, ಪೂಜಾ ಕರೆಮ್ಮನವರ, ದರ್ಶನ ಪಂಪನಗೌಡ್ರ, ಇತರರು ಪಾಲ್ಗೊಂಡಿದ್ದರು.