

ಹಾವೇರಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೇವುಂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜೂ.15ರಿಂದ 21ರವರೆಗೆ ವಿದ್ಯಾರ್ಥಿಗಳಿಗೆ ಯೋಗ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಇತ್ತೀಚೆಗೆ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯೋಪಾಧ್ಯಾಯ ವೀರೇಶ ಗಡ್ಡದ್ದೇವರಮಠ ಮಾತನಾಡಿ, ಯೋಗ ನಿತ್ಯ ಕರ್ಮವಾಗಬೆಕು. ಯೋಗ ಎಂದರೆ ಜೋಡಿಸು ಎಂದರ್ಥ. ಮನಸ್ಸು ಹಾಗೂ ದೇಹವನ್ನು ಜೋಡಿಸಿ ಏಕಾಗ್ರತೆ ಸಾಧಿಸಿದಾಗ ವಿದ್ಯಾಭ್ಯಾಸ ಹಾಗೂ ನಿತ್ಯದ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದರು.
ಶಿಕ್ಷಕ ಬಸವರಾಜ ಪೂಜಾರ ಮಾತನಾಡಿ, ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಿ.ಎಸ್.ರಿತ್ತಿ, ಸುಜಾತಾ ಕಡಕೋಳ, ಸಚಿನ ವಾಲ್ಮೀಕಿ, ಸವಿತಾ ಗೊಲ್ಲರ, ನೀಲಮ್ಮ ದ್ಯಾವನಗೌಡ್ರ, ಮಂಜುನಾಥ ಕೆಂಚಮಲ್ಲ, ಪ್ರದೀಪ ವಿಜಾಪೂರ ಹಾಗೂ ಪ್ರಶಿಕ್ಷಣಾರ್ಥಿಗಳಾದ ಅನಿಲ ಬಾಲೇಹೊಸೂರ ಹಾಗೂ ನೀಲಾ ಮುದ್ದಿ, ರಾಜೇಶ್ವರಿ ಸರವಂದ, ಶ್ವೇತಾ ಭರಮಗೌಡ್ರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.