

ಹಾವೇರಿ: ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಹಾವು ಕಡಿತದಿಂದ ಮೃತಪಟ್ಟ 5ನೇ ತರಗತಿ ವಿದ್ಯಾರ್ಥಿನಿ ಭಾರತಿ ಸಿದ್ದಪ್ಪ ಮಾಳಪ್ಪನವರ ಹಾಗೂ ಅಕಾಲಿಕವಾಗಿ ಮೃತಪಟ್ಟ ತೆರೆದಹಳ್ಳಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಬಸವರಾಜ ಕರಿಯಪ್ಪ ಚಿಟಿಗಿ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ ಸೋಮವಾರ ಭೇಟಿ ನೀಡಿ, ಪಾಲಕರಿಗೆ ಸಾಂತ್ವನ ಹೇಳಿದರು.
ಮೇವುಂಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ.ಎಂ ಗಡ್ಡದೇವರಮಠ ಹಾಗೂ ತೆರೆದಳ್ಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಾಡದ, ಶಿಕ್ಷಣ ಸಂಯೋಜಕರಾದ ಹನುಮಗೌಡ್ರ ಹಾಗೂ ಭಗವಂತಗೌಡ್ರ ಮತ್ತು ಬಸವರಾಜ ಪೂಜಾರ, ಇತರರು ಇದ್ದರು.