ಹಾವೇರಿ: ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜ್ನಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದು ವೈದ್ಯೆಯಾಗಿರುವ ಹಾನಗಲ್ಲ ತಾಲೂಕು ಡೊಳ್ಳೇಶ್ವರ ಗ್ರಾಮ ಪಂಚಾಯಿತಿ ಡಿ ದರ್ಜೆ ನೌಕರ ಅಜ್ಜಪ್ಪ ಬಾರ್ಕಿ ಹಾಗೂ ಆಶಾ ಕಾರ್ಯಕರ್ತೆ ಸೌಭಾಗ್ಯ ಅಜ್ಜಪ್ಪ ಬಾರ್ಕಿ ದಂಪತಿ ಪುತ್ರಿ ಡಾ.ಅರ್ಪಿತಾ ಬಾರ್ಕಿ ಹಾಗೂ ಪಾಲಕರನ್ನು ಹಾವೇರಿ ಜಿಪಂ ಕಚೇರಿಯಲ್ಲಿ ಇತ್ತೀಚೆಗೆ ಜಿಪಂ ಸಿಇಒ ರುಚಿ ಬಿಂದಲ್ ಸನ್ಮಾನಿಸಿದರು. ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್.ಬಿ.ಆರ್., ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ ಇದ್ದರು.