ಹಾವೇರಿ: ರಾತ್ರಿ ಕಬ್ಬಿನ ಗದ್ದೆಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಕಾಡು ಪ್ರಾಣಿಗಳು ತಿಂದು ಹಾಕಿರುವ ದುರ್ಘಟನೆ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಬುಧವಾರರಾತ್ರಿ ಸಂಭವಿಸಿದೆ.
ಗ್ರಾಮದ ಮಂಜುನಾಥ ಹನುಮಪ್ಪ ಡಬಾಲಿ (29) ಕಾಡು ಪ್ರಾಣಿಗಳಿಗೆ ಆಹಾರವಾದ ವ್ಯಕ್ತಿ.
ಈತ ಕೃಷಿ ಕಾರ್ಮಿಕನಾಗಿದ್ದು ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬರುತ್ತಿದ್ದ ಸಮಯದಲ್ಲಿ ಕಬ್ಬಿನ ಗದ್ದೆಯಲ್ಲಿ ಬಿದ್ದಿದ್ದಾನೆ. ಈ ಸಮಯದಲ್ಲಿ ಯಾವುದೋ ಕಾಡು ಪ್ರಾಣಿಗಳು ಆತನ ಮೇಲೆ ದಾಳಿ ಮಾಡಿ ತಲೆ, ದೇಹ ತಿಂದು ಹಾಕಿವೆ. ಕೆಲ ಮೂಳೆಗಳು ಮಾತ್ರ ಉಳಿದುಕೊಂಡಿದ್ದು, ಆತ ಹಾಕಿದ್ದ ಬಟ್ಟೆಗಳ ಮೇಲೆ ಆತನನ್ನು ಗುರುತಿಸಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.