

ಹಾವೇರಿ: ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ಗದಿಗೇಶ್ವರ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸದ ನಿಮಿತ್ತ ಶ್ರೀ ಗದಿಗೇಶ್ವರ ಹಾಗೂ ಶ್ರೀ ವಿರುಪಾಕ್ಷೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ಉಭಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿ ವಿಶೇಷ ಮಂಗಳಾರತಿ ಸಲ್ಲಿಸಲಾಯಿತು. ನಂತರ ಗ್ರಾಮದಲ್ಲಿ ಶ್ರೀ ಗದಿಗೇಶ್ವರ ಹಾಗೂ ಶ್ರೀ ವಿರುಪಾಕ್ಷೇಶ್ವರ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಗುರುಶಾಂತೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದೇವಸ್ಥಾನದಲ್ಲಿ ಸಪ್ತಾಕಾರ್ಯ ನಡೆಯಿತು. ಗ್ರಾಮದ ಭಕ್ತಾದಿಗಳು ರಾತ್ರಿಯಿಡಿ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ನಾಮಸ್ಮರಣೆ ಜಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.