ಮಲ್ಲಾಡದ ಆಸ್ಪತ್ರೆ ಕ್ರಾಸ್‌ ಖಾಲಿ ಸೈಟ್‌ನಲ್ಲಿ ಕಸದ ರಾಶಿ

13 HVR 3
Published on

ಹಾವೇರಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಬಸೇಗೆಣ್ಣಿ ಪೆಟ್ರೋಲ್ ಬಂಕ್ ಸಮೀಪ ಮಲ್ಲಾಡದ ಆಸ್ಪತ್ರೆ ಕ್ರಾಸ್‌ನ ರಸ್ತೆ ಪಕ್ಕದ ಖಾಲಿ ಸೈಟ್‌ನಲ್ಲಿ ಕಸದ ರಾಶಿ ನಿರ್ಮಾಣವಾಗಿದ್ದು, ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.

ಈ ಸ್ಥಳದಲ್ಲಿ ಜನ ಕಸ ಎಸೆದು ಹೋಗುತ್ತಿದ್ದಾರೆ. ಇರಿಂದಾಗಿ ಇಲ್ಲಿ ಕಸದ ರಾಶಿ ನಿರ್ಮಾಣವಾಗಿದೆ. ನಾಯಿ, ಹಾವುಗಳ ವಾಸ ಸ್ಥಳ ಕಂಡಂತೆ ಭಾಸವಾಗುತ್ತಿದೆ. ಜೋರಾಗಿ ಗಾಳಿ ಬೀಸಿದಾಗ ಕಸ ತೋರಿಕೊಂಡು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದಾಗಿ ಸುತ್ತಲೂ ಕೆಟ್ಟ ವಾಸನೆ ಹರಡುತ್ತಿದೆ. ನಗರಸಭೆ ಅಧಿಕಾರಿಗಳು ಈ ಸ್ಥಳವನ್ನು ಸ್ವಚ್ಛಗೊಳಿಸಿ, ಇಲಿ ಕಸ ಹಾಕದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರಾದ ಡಾ.ಗಿರೀಶ ಮಲ್ಲಾಡದ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net