ಮೈಲಾರ-ದೇವರಗುಡ್ಡ ಜಾತ್ರೆಗೆ ಹೆಚ್ಚುವರಿ ಸಾರಿಗೆ ಸೌಲಭ್ಯ

Published on

ಹಾವೇರಿ: ಸುಕ್ಷೇತ್ರ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮಿಯ ಹಾಗೂ ಶ್ರೀ ಮೈಲಾರಲಿಂಗೆಶ್ವರ ಸ್ವಾಮಿಯ ಜಾತ್ರೆ ಫೆ.11ರಿಂದ ಫೆ.15ರವರೆಗೆ ಜರುಗಲಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಹಾವೇರಿ, ರಾಣೆಬೆನ್ನೂರ, ಗುತ್ತಲ, ಬ್ಯಾಡಗಿ ಹಾಗೂ ಹೊಸರಿತ್ತಿ ಬಸ್ ನಿಲ್ದಾಣಗಳಿಂದ ದೇವರಗುಡ್ಡ ಹಾಗೂ ಮೈಲಾರಕ್ಕೆ ಹೆಚ್ಚುವರಿ ಜಾತ್ರಾ ವಿಶೇಷ ಸಾರಿಗೆ ಸೌಲಭ್ಯ ಕಾರ್ಯಾಚರಣೆ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾ.ಕ.ರ.ಸಾ.ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net